Saturday, November 26, 2022

Bidar Utsava- Bidar Utsava on January 7, 8, 9, 2023: Dozens of events to be held for three days

Bidar: Bidar Utsav is our Utsav and everyone in the district should join hands to make it a model festival in the state, said the District Collector Sri Govinda Reddy. He presided over a pre-meeting called for all the associations and office bearers of the district on Bidar Utsav at the District Collector's office meeting hall on Wednesday. As Bidar Utsav is celebrated on January 7, 8 and 9, 2023, everyone in the district should express their views. He said that there is one and a half months left for this and everyone should actively participate to make this Utsav a grand success by giving their suggestions and instructions.

DC Urged Bidar Citizens  to decorate house, shop front during Bidar Utsav

On the days of Bidar Utsav, everyone in Bidar district should decorate their houses with trinkets and their houses, shops and other places should be decorated with lights to make it look like a festive atmosphere. A meeting of the hotel owners has already been called and they have been asked to provide 60% of the rooms for free to the tourists coming to Bidar district and they have agreed to it. He said that this Utsav will also boost tourism in Bidar district. 

District Superintendent of Police Sri Dekka Kishorababu, Additional District Commissioner Sri Shivkumar Shilavant, Assistant Director of Kannada and Culture Department Sri Sidrama Shinde, leaders and office bearers of various organizations of the district participated in this program and gave their valuable suggestions and instructions about Bidar Utsav. A marathon is held a day before the Utsav. On the morning of the first day of the program, a procession begins with various art troupes. Every evening from 6 pm there will be programs for local artists followed by state artistes and national level artists. In this festival, there are many events like Raitha Mela, Pashu Mela, Book Fair, Music Mela, Women's Festival, Kite Festival, various sports and cultural events. District Collector Sri Govinda Reddy said.

Bidar Utsava- 2023ರ ಜನವರಿ 7, 8 , 9ರಂದು ಬೀದರ್‌ ಉತ್ಸವ: ಮೂರು ದಿನ ನಡೆಯಲಿವೆ ಹತ್ತಾರು ಕಾರ್ಯಕ್ರಮ

ಬೀದರ್: ಬೀದರ ಉತ್ಸವ ನಮ್ಮ ನಿಮ್ಮ ಉತ್ಸವವಾಗಿದ್ದು, ಇದನ್ನು ಜಿಲ್ಲೆಯ ಎಲ್ಲರೂ ಸೇರಿ ಯಶಸ್ವಿಗೊಳಿಸುವ ಮೂಲಕ ರಾಜ್ಯದಲ್ಲಿ ಇದೊಂದು ಮಾದರಿ ಉತ್ಸವವಾಗುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್ ಉತ್ಸವ ಕುರಿತು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಪದಾಧಿಕಾರಿಗಳಿಗೆ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2023ರ ಜನೆವರಿ 7, 8 ಮತ್ತು 9 ರಂದು ಬೀದರ್ ಉತ್ಸವವನ್ನು ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಇದಕ್ಕೆ ಇನ್ನು ಒಂದೂವರೆ ತಿಂಗಳು ಕಾಲಾವಕಾಶವಿದ್ದು ಎಲ್ಲರೂ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮೂಲಕ ಈ ಉತ್ಸವ ಯಶಸ್ವಿಗೊಳಿಸಲು ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು. ಮನೆ, ಅಂಗಡಿ ಮುಂಗಟ್ಟು ಶೃಂಗರಿಸಲು ಸೂಚನೆ ಬೀದರ್ ಉತ್ಸವದ ದಿನಗಳಂದು ಬೀದರ್ ಜಿಲ್ಲೆಯ ಎಲ್ಲರೂ ತಮ್ಮ ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು ಹಾಗೂ ತಮ್ಮ ಮನೆ, ಅಂಗಡಿಗಳು ಸೇರಿದಂತೆ ಇತರೆಡೆಗೆ ದೀಪಾಲಂಕಾರ ಮಾಡಿ ಹಬ್ಬದ ವಾತಾವರಣದಂತಿರಬೇಕು. ಈಗಾಗಲೇ ಹೋಟೆಲ್ ಮಾಲೀಕರ ಸಭೆ ಕರೆದು ಅವರಿಗೆ ಶೇ.60% ರೂಮ್‍ಗಳನ್ನು ಬೀದರ್ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಉಚಿತವಾಗಿ ನೀಡಲು ಹೇಳಿದ್ದು ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ. ಈ ಉತ್ಸವದಿಂದ ಬೀದರ್ ಜಿಲ್ಲೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರಬಾಬು, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ್ ಶೀಲವಂತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಹಾಗು ಪದಾಧಿಕಾರಿಗಳು ಭಾಗವಹಿಸಿ ಬೀದರ ಉತ್ಸವ ಕುರಿತು ತಮ್ಮ ಅಮೂಲ್ಯವಾದ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಉತ್ಸವದ ಒಂದು ದಿನ ಮೊದಲು ಮ್ಯಾರಥಾನ್‌ ಓಟ ಇರುತ್ತದೆ. ಕಾರ್ಯಕ್ರಮದ ಮೊದಲ ದಿನ ಬೆಳಗ್ಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಆರಂಭವಾಗುತ್ತದೆ. ಪ್ರತಿ ದಿನ ಸಂಜೆ 6 ರಿಂದ 7.15 ರವರೆಗೆ ಸ್ಥಳೀಯ ಕಲಾವಿದರಿಗೆ ನಂತರ ರಾಜ್ಯದ ಕಲಾವಿದರು, ರಾಷ್ಟ್ರ ಮಟ್ಟದ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ. ಈ ಉತ್ಸವದಲ್ಲಿ ರೈತ ಮೇಳ, ಪಶು ಮೇಳ, ಪುಸ್ತಕ ಮೇಳ, ಸಂಗೀತ ಮೇಳ, ಮಹಿಳಾ ಉತ್ಸವ, ಗಾಳಿಪಟ ಉತ್ಸವ, ವಿವಿಧ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

Friday, November 25, 2022

ಬೀದರ ಉತ್ಸವ, 2023

ಬೀದರ ಉತ್ಸವ, 2023ರ ಜನವರಿ 7, 8 ಮತ್ತು 9 ರಂದು ನಡೆಯಲ್ಲಿರುವ ಬೀದರ ಉತ್ಸವದ ಲೋಗೊವನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಹ ಸಚಿವರಾದ ಶ್ರೀ ಭಗವಂತ ಖೂಬಾ ಅವರು ಇಂದು ಬೀದರ ಉತ್ಸವದ ಲೋಗೊ ಬಿಡುಗಡೆಗೊಳಿಸಿದರು.

WELC OME TO BIDAR UTSAV 2O23

Bidar Utsav 2023 Logo Lanched on 2t th November 2022 by Minister of Starte, New and Renewalble Ewnergy, Chemicals & Fertilizers. Govt. of INDIA, MP of Bidar Mr. Bhagawanth Khuba