ಬೀದರ್: ನಗರದ ರಂಗ ಮಂದಿರದಲ್ಲಿ ಬೀದರ್ ಉತ್ಸವದ ನಿಮಿತ್ತ ಎರಡು ದಿನಗಳ ಕಾಲ ನಡೆದ ಉದ್ಯೋಗ ಮೇಳದಲ್ಲಿ ನೂರಾರು ನಿರುದ್ಯೋಗಿ ಯುವತಿ-ಯುವಕರಿಗೆ ಉದ್ಯೋಗಾವಕಾಶ ನೀಡುವುದರ ಮೂಲಕ ಉದ್ಯೋಗ ಮೇಳಕ್ಕೆ ಶುಕ್ರವಾರ ತೆರೆ ಬಿದ್ದಿತು.
ಎರಡು ದಿನ ನಡೆದ ಉದ್ಯೋಗ ಮೇಳದಲ್ಲಿ 4,500 ಜನ ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಣಿ ಮಾಡಿದ್ದು, ಕಂಪನಿಗಳು 714 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿವೆಯಲ್ಲದೆ 350 ಅಭ್ಯರ್ಥಿಗಳಿಗೆ ಹೆಚ್ಚುವರಿ ತರಬೇತಿ ನೀಡಿದ ಬಳಿಕ ಉದ್ಯೋಗಾವಕಾಶ ಕಲ್ಪಿಸುವುದಾಗಿ ತಿಳಿಸಿವೆ ಎಂದು ಉದ್ಯೋಗ ಮೇಳದ ಸಂಯೋಜಕರಾದ ಡಿ.ಬಿ.ರುಕ್ಮಾಂಗದ ತಿಳಿಸಿದ್ದಾರೆ.
ಉದ್ಯೋಗ ಮೇಳದ ಎರಡನೇ ಮತ್ತು ಸಮಾರೋಪದ ದಿನವಾದ ಶುಕ್ರವಾರ ಕೂಡ ಉದ್ಯೋಗಾಕಾಂಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಮಧ್ಯೆ ಉದ್ಯೋಗ ಮೇಳದಲ್ಲಿ ಮಹಾರಾಷ್ಟ್ರ, ಪುಣೆ ಮೂಲದ ಸರಕಾರೇತರ ಸಂಸ್ಥೆಯ ಮುಖ್ಯಸ್ಥ ಸ್ಮಿತೇಶ್ ಉಂಡಾಳೆ ನಮ್ಮ ಸಂಸ್ಥೆಯು ಉದ್ಯೋಗ ಮೇಳದಲ್ಲಿ 300 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ. ಮಹಾರಾಷ್ಟ್ರ ಸರಕಾರ ಜಾರಿಗೆ ತಂದಿರುವ ಕಲಿಯುವಾಗಲೇ ಗಳಿಸು ಎಂಬ ಯೋಜನೆಯಡಿ ಈ 300 ಅಭ್ಯರ್ಥಿಗಳಿಗೆ ನಾಶಿಕ್‌ನಲ್ಲಿರುವ ಯಶವಂತರಾವ್ ಮುಕ್ತ ವಿಶ್ವವಿದ್ಯಾಲಯದ ಬಿಎಸ್‌ಸಿ ಇಂಡಸ್ಟ್ರೀಸ್ ಸೈನ್ಸ್ ಪದವಿ ಕೋರ್ಸ್ ಪ್ರವೇಶಾವಕಾಶ ಮತ್ತು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಮೂರು ವರ್ಷಗಳ ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 7 ಸಾವಿರ ರೂ.ಗಳಿಂದ ಹಿಡಿದು 8 ಸಾವಿರ ರೂ.ಗಳನ್ನು ನೀಡುವುದರ ಜತೆಗೆ ಅವರ ವಾಸ್ತವ್ಯದ ಸೌಲಭ್ಯದ ಖರ್ಚು-ವೆಚ್ಚವನ್ನು ಮಹಾರಾಷ್ಟ್ರ ಸರಕಾರವೇ ಭರಿಸುತ್ತದೆ ಎಂದು ತಿಳಿಸಿದ
No comments:
Post a Comment