Monday, January 27, 2014

ವಿಷಯದ ಬಗ್ಗೆ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಬೋಧನೆ ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಅದನ್ನು ಏಕಾಗ್ರತೆಯಿಂದ ಅಭ್ಯಸಿಸುವುದು ಸಾಧ್ಯ’ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇತರೆ ಸಂಸ್ಥೆಗಳ ಆಶ್ರಯದಲ್ಲಿ ನಗರದ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾ­ಗಾರದಲ್ಲಿ ‘ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಗುಣಾತ್ಮಕ ಶಿಕ್ಷಣ’ ವಿಷಯ ಕುರಿತು ಮಾತನಾಡಿದರು.
ವಿಷಯದ ಬಗ್ಗೆ ಆಸಕ್ತಿ ಇಲ್ಲದಿರುವುದೇ ಬಹುತೇಕ ವಿದ್ಯಾರ್ಥಿ­ಗಳು ಪರೀಕ್ಷೆಯಲ್ಲಿ ಅನುತ್ತೀರ್ಣ ರಾಗುತ್ತಿದ್ದಾರೆ. ಎಲ್ಲಿ ಆಸಕ್ತಿ ಇರುತ್ತದೆಯೋ ಅಲ್ಲಿ ಏಕಾಗ್ರತೆ ಇರುತ್ತದೆ. ವಿದ್ಯಾರ್ಥಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗುತ್ತಾನೆ ಅಂದರೆ ಅವನಿಗೆ ಆ ವಿಷಯದ ಶಿಕ್ಷಕ ಸರಿಯಾಗಿ ಬೋಧನೆ ಮಾಡಿಲ್ಲ. ತನ್ನ ವಿಷಯದ ಬಗ್ಗೆ ವಿದ್ಯಾರ್ಥಿಯಲ್ಲಿ ಆಸಕ್ತಿ ಬೆಳೆಸಿಲ್ಲ ಎಂದೇ ಅರ್ಥ ಎಂದರು.
ಹೆಚ್ಚಿನ ಅಂಕ ಪಡೆಯುವುದಷ್ಟೇ ಮುಖ್ಯವಲ್ಲ. ಗುಣಾತ್ಮಕ ಶಿಕ್ಷಣ ನೀಡುವುದೂ ಮುಖ್ಯ. ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡಬೇಕು. ಆಗ ತಾನಾಗಿಯೇ ಫಲಿತಾಂಶ ಸುಧಾರಣೆ ಆಗುತ್ತದೆ. ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಬದಲಾವಣೆ ಮಾಡುವ ಸಂಸ್ಥೆ­ಗಳಾಗಬೇಕೇ ಹೊರತು ಕೇವಲ ಪ್ರಮಾಣ ಪತ್ರಗಳು ನೀಡುವ ಸಂಸ್ಥೆಗಳಾಗಬಾರದು. ಆಧುನಿಕತೆ­ಯಲ್ಲಿ ಕಲಿಕೆಯಲ್ಲಿ ಬದಲಾವಣೆ ಆಗುತ್ತಿದೆ. ಆದರೆ ಶಿಕ್ಷಕರು ಕಲಿಸುವ ವಿಧಾನ ಮಾತ್ರ ಬದಲಾವಣೆ ಆಗುತ್ತಿಲ್ಲ ಎಂದು ಹೇಳಿದರು.
ಶಿಕ್ಷಕರು ವಿಷಯದ ಬಗ್ಗೆ ಪರಿಪೂರ್ಣವಾದ ಜ್ಞಾನ ಪಡೆದುಕೊಂಡು ವಿದ್ಯಾರ್ಥಿಗಳ ಮಟ್ಟವನ್ನು ಅರಿತುಕೊಂಡು ಬೋಧನೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಫಲಿತಾಂಶ ಸುಧಾರಣೆಯೇ ಸವಾಲು: ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳ ಫಲಿತಾಂಶ ಸುಧಾರಣೆಯೇ ಒಂದು ಸವಾಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ಜಿ. ನಮೋಶಿ ಹೇಳಿದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನಿಲ್‌ ಪನ್ವಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಂಗಣ್ಣ ಸ್ವಾಮಿ, ಇನಾಯತ್‌ ಅಲಿ ಶಿಂಧೆ, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ್‌ ಪಾಟೀಲ್‌, ಕರ್ನಾಟಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತಕುಮಾರ್‌ ಬಿರಾದಾರ್‌, ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಬಾಬುರಾವ್‌ ದಾನಿ, ಕರ್ನಾಟಕ ರಾಜ್ಯ ಸಹ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್,  ರೇವಣಸಿದ್ದಪ್ಪ ಜಲಾದೆ, ರಿಷಿಕೇಶ್‌ ಬಹಾದ್ದೂರ ದೇಸಾಯಿ ಇದ್ದರು

2 comments:

  1. I came to know that, in this Bidar Utsaav there will be photo gallery. I just want to know to whom I should contact for the same.

    ReplyDelete
  2. Visit Rangeen Mahal for Photo Gallery

    ReplyDelete