Tuesday, January 28, 2014

ಬೀದರ್ ಉತ್ಸವ ಪ್ರಚಾರ ರಥಕ್ಕೆ ಡಿಸಿ ಚಾಲನೆ

ಫೆ.1 ರಿಂದ 3ರವರೆಗೆ ನಡೆಯಲಿರುವ ಬೀದರ್ ಉತ್ಸವದ ಮಾಹಿತಿಯನ್ನು ಜಿಲ್ಲೆಯ 5 ತಾಲೂಕುಗಳಲ್ಲಿ ಸಂಚರಿಸಿ ಪ್ರಚಾರ ಪಡಿಸುವ ಉತ್ಸವದ ಪ್ರಚಾರದ ರಥಕ್ಕೆ ಜಿಲ್ಲಾಧಿಕಾರಿ ಡಾ. ಜಾಫರ್ ಶುಕ್ರವಾರ ಸಂಜೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಪ್ರಚಾರ ರಥವು ಉತ್ಸವದಲ್ಲಿ ಆಯೋಜಿಸಲಾಗುವ ಪ್ರಮುಖ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಚಾರ ಪಡಿಸಲಿದೆ. ಅಲ್ಲದೇ ಉತ್ಸವದ ಪ್ರಮುಖ ಕಾರ್ಯಕ್ರಮಗಳನ್ನು ಫ್ಲೆಕ್ಸ್‌ನಲ್ಲಿ ಮುದ್ರಿಸಿ ವಾಹನಕ್ಕೆ ಅಳವಡಿಸಿ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.
12 ಜನ ಕಲಾವಿದರಿಂದ ಮಾಹಿತಿ: ವಾಹನದೊಂದಿಗೆ ಜನಪದ ಕಲಾವಿದ ವಿಜಯಕುಮಾರ ಸೋನಾರೆ ಸೇರಿದಂತೆ ಒಟ್ಟು 12 ಜನ ಕಲಾವಿದರು ಪ್ರತಿದಿನ ಜಾನಪದ ಸಂಗೀತ ಪ್ರಸ್ತುತ ಪಡಿಸಿ ಉತ್ಸವದ ಮಾಹಿತಿಯನ್ನು ಗ್ರಾಮ ಮಟ್ಟದಲ್ಲಿ ತಿಳಿಸುವರು.
ಕಲಾವಿದರ ತಂಡವು  ಬನ್ನಿ ಬನ್ನಿ, ನೀವು ಬನ್ನಿ, ನಿಮ್ಮೊಡನೆ ಇತರರನ್ನು ಕರೆ ತನ್ನಿ ಎಂಬ ಹಾಡಿನ ಮೂಲಕ ಗ್ರಾಮಸ್ಥರನ್ನು ಬೀದರ್ ಉತ್ಸವಕ್ಕೆ ಆಹ್ವಾನಿಸಲಿದೆ. ಕಲಾವಿದರ ತಂಡವು ಶುಕ್ರವಾರ ತಾಲೂಕಿನ ಕೆಲ ಪ್ರದೇಶಗಳಲ್ಲಿ ಸಂಚರಿಸಿ ಕಾರ್ಯಕ್ರಮ ನೀಡಿದೆ. ಎಲ್ಲ ಗ್ರಾಪಂ ಮಟ್ಟದಲ್ಲಿ ಕಾರ್ಯಕ್ರಮ ಮುಗಿಸಿದ್ದು, ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಸಂಚರಿಸಿ ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ.
30ರಂದು ನಗರಕ್ಕೆ: ಜ.30ರಂದು ಕಲಾತಂಡ ಹಾಗೂ ವಾಹನ ಬೀದರ್ ನಗರಕ್ಕೆ ಆಗಮಿಸಲಿದೆ. ವಾಹನ ಹಾಗೂ ಕಲಾತಂಡದೊಡನೆ ಜ್ಯೋತಿಯು ಸಂಚರಿಸಿದ್ದು ವಿಶೇಷವಾಗಿದೆ. 24ರಂದು ರಥವು ಬೀದರ್ ನಗರ ವ್ಯಾಪ್ತಿಯಲ್ಲಿ, 25ರಂದು ಔರಾದ್ ತಾಲೂಕು, 26ರಂದು ಭಾಲ್ಕಿ ತಾಲೂಕು, ಜ.27ರಂದು ಬಸವಕಲ್ಯಾಣ, ಜ.28ರಂದು ಹುಮನಾಬಾದ್ ತಾಲೂಕುಗಳಲ್ಲಿ 29ರಂದು ಚಿಟಗುಪ್ಪ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದಲ್ಲಿ ಹಾಗೂ 30ರಂದು ಬೀದರ್ ತಾಲೂಕು ಹಾಗೂ ಬೀದರ್ ನಗರ ವ್ಯಾಪ್ತಿಯಲ್ಲಿ ಸಂಚರಿಸಲಿದೆ.

No comments:

Post a Comment